Skip to main content

Posts

Showing posts with the label kannada

ಇನ್ನೆಷ್ಟು ದೂರ?

Image source ಹಿಂದೆ ಕ್ರಮಿಸಿದ ಹಾದಿಯನ್ನುಳಿದು ಇನ್ನೂ ಎನಿತು ದೂರ? ಬಿಸಿಲ ಬೇಗೆ, ಬಳಲಿಕೆ, ಕಾಲ ಸುಡುವ ಉಸುಕು, ಬೆಯ್ವ ನೆತ್ತಿಯ ಮುಸುಕು. ಒಂಟಿತನದ ಬಿಸಿಯುಸಿರಿಗೆ ಬೀಸಿ ಬರುವ ಬಿಸಿ ಗಾಳಿಗಿಂತ ತೀವ್ರ ಝಳ. ಮುಂದೆಲ್ಲೋ ಇದೆಯಂತೆ ತಣ್ಣನೆಯ ಕೊಳ, ತಂಪು ನೆಳಲ ಖರ್ಜೂರದ ಮರ,  ಹತ್ತೆಂಟು ಒಂಟೆಗಳ, ಅವುಗಳೊಡೆಯನ ಬಿಡಾರ, ಇನ್ನೂ ಎಷ್ಟು ದೂರ? ಹೋಗದಿಲ್ಲೆ ಉಳಿದರೆ ಬರುವನೇ ನನ್ನ ರಾಜಕುಮಾರ? ಒಂಟೆಗಳ ಸಾಲ ಮಧ್ಯೆ ತರುವನೇ ಮೇನೆ ಬಿಸಿಲ ಝಳ ತಾಗದಂತೆ, ಕಾದ ಮರಳು ಸುಡದಂತೆ ಕಾಪಿಟ್ಟು ಕರೆದೊಯ್ವನೆ? ನಿಂತರೆ ಜಡವಾಗುತ್ತಾ ಇಲ್ಲವಾಗುವ ಭಯ ನಡೆದರೆ ಎಲ್ಲವೂ ಮರೀಚಿಕೆಯಾಗುವ  ಭಯ ನಿಲ್ಲಲೇ ಇಲ್ಲೇ ಕಾಯುತ್ತಾ. ಇಲ್ಲಾ, ಹೋಗಲೇಮುಂದೆ ದಾರಿ ತೋಚಿದತ್ತ? ಜಾಹ್ನವಿ ಕಣಕಟ್ಟೆ

ಬದುಕಲು ಬಿಡು

ದಿಕ್ಕೆಡೆಸಿ, ಕಂಗೆಡಿಸಿ, ಮನ ನೋಯಿಸುವೆ ನೀ ನಾ ಬೀದಿಪಾಲಾಗಬೇಕೆಂಬ ಆಸೆ ಏಕೆ? ಒಡಹುಟ್ಟಿದವರಲ್ಲವೆ ನಾನು ನೀನು? ಕೂಡಿ, ಬದುಕಿ, ಬಾಳಿ ಎಂದವರ ಮನೆಯಲ್ಲಿ ಹುಟ್ಟಿ ಹೀಗೇಕೆನುವೆ ನೀ? ದೇವರ ನಾಮ ನುಡಿಯುತ್ತಾ, ಹಿರಿಯರು ತೋರಿದ ಹಾದಿಯಲ್ಲಿ ನಡೆಯುವುದನ್ನು ಬಿಟ್ಟು ಬಾರದು ನನಗೆ ಬೇರೇನು. ಬದುಕಲು ಬಿಡು ನನ್ನನ್ನು ಓ ಸುಖಜೀವಿ ಎಂದಿಗೂ ಮರೆಯೆನು ನಾ ನಿನ್ನ ಋಣವನು ಬದುಕಲು ಬಿಡು ನನ್ನನ್ನು ಓ ಸುಖಜೀವಿ ಜಾಹ್ನವಿ. ಕೆ. ಜೆ

ಮಳೆ ಬರುತ್ತಿದೆ

"ಮಳೆ ಬರುತ್ತಿದೆ" ಎಂದಾಗ, ಕಾಲೆಲ್ಲಿದೆ ನಿನಗೆ ಮಳೆಯಲ್ಲಿ ನಡೆಯಲು ಎಂದು ವ್ಯಂಗ್ಯವಾಡಿ ನಕ್ಕರಲ್ಲೇ ಗೆಳತಿ! " ಮನುಜರಿವರೆ?" ಎಂದೆನಿಸಿದಾಗ, ಘೊಳ್ಳ್ ಎಂದು ನಕ್ಕು ಕಟಕಿಯಾಡಿ ನೋಯಿಸಿ ನಕ್ಕರಲ್ಲೇ ಗೆಳತಿ! ಕಳೆದ ಕೊಂಡಿಯ ಜೋಡಿಸಿ ಬೆಸೆಯಲು ಹೊರಟಾಗ ಕೈತಟ್ಟಿ ನಕ್ಕು ಸಂಬಂಧವೇನು ಎಂದು ಹಂಗಿಸಿದರಲ್ಲೇ! ಕಾಲನ ತುಳಿತಕ್ಕೆ ಹರಡಿ ಹೋದ ಬದುಕು ಕಟ್ಟಿಕೊಳ್ಳುತ್ತೇನೆಂದಾಗ "ಕಾಲಿಲ್ಲವೇ ನಿನಗೆ" ಎಂದು ನೆನಪಿಸಿ ಕಿಸಕ್ಕೆಂದರಲ್ಲೇ ಗೆಳತಿ! ಬೇಸಗೆಯ ಮೊದಲ ಮಳೆಯ ತಂಪು ಸಿಂಚನಕ್ಕೊಂದು ಕ್ಷಣ ಮಾರು ಹೋದ ಮನ "ಮಳೆ ಬರುತ್ತಿದೆ" ಎಂದಾಗ ನಕ್ಕರ್ಯಾಕೆ ಇವರೆಲ್ಲ? "ಮಳೆ ಬರುತ್ತಿದೆ" ಎಂದಾಗ ನಡೆಯಲು ಕಾಲಿಲ್ಲದೆಯೂ, ಮನ, ಕಪ್ಪು ಡಾಂಬರು ರಸ್ತೆಯುದ್ದಕ್ಕೂ ಹರಿದಾಡಿದ್ದೂ ಸುಳ್ಳೇನೇ ಗೆಳತಿ? ನೆತ್ತಿ ಚರ್ಮ ಸುಡುವ ಬಿಸಿಲಿಗೆ ದಪ್ಪನೆಯ ಮಳೆಹನಿ  ಭುಸುಗುಡುವ ಬಿಸಿ ನೆಲಕ್ಕೆ ಪನ್ನೀರ ತುಂತುರು ಹನಿ ಬೆವರ ಬಸಿಯುವ ಸೆಕೆಗೆ ತಂಪಾದ ಗಾಳಿ, ಮೈಮರೆಸಿತ್ತು, "ಮಳೆ ಬರುತ್ತಿದೆ" ಎಂಬ ಉದ್ಗಾರಕ್ಕೆ ವ್ಯಂಗ್ಯವೇಕೆ ಸಿಕ್ಕಿತು? ಮತ್ತೊಂದು ನಗೆ, ಬಿಸಿಲು ಮಳೆಯ ಕಾಮನಬಿಲ್ಲು ಮೂಡಬಹುದಲ್ಲ ಜೀವನದಾಗಸದಲ್ಲಿ! ಹಂಬಲಿಸಿ ಕಾದಾಗ ಬಿದ್ದೊಂದೆರಡು ಹನಿ, ಆಸೆಯ ಕೊನರಿಸಿ "ಮಳೆ ಬರುತ್ತಿದೆ" ಎಂದಾಗ ತುಟಿ ಸೊಟ್ಟ ಮಾಡಿ ನಗು ಮುಕ್ಕಳಿಸಿ ಚೆಲ್ಲಿದರೇಕೆ ಗೆ...

A song...

Today on valentine's day, I remember a beautiful bhavageethe sung by M.S.Sheela. I had heard this song on TV probably 7 years back. The song is full of emotions. I feel like singing it again and again. I want to share this song in this blog. I do not know who has written it. ನೀ ನುಡಿಯದಿರಬಹುದು ನೀ ನಂಬದಿರಬಹುದು  ನೀನೊಲ್ಲದಿರಬಹುದು ನನ್ನೊಲವನು| ಕೋಟಿ ತಾರೆಗಳ್‌ಹೊಳೆದು ತುಂಬು ಚಂದಿರ ಮಿನುಗಿ ಆದರೂ ತುಂಬದಿದೆ ಬಾನಿನೋಡಲು|| ನಾನೊಲಿದು ಬರುವಾಗ ನೀನು ಒಲ್ಲೆನು ಎಂದು ನನ್ನೆಡೆಗೆ ಮೊಗದಿರುಗಿ ಸಾಗಬಹುದು| ಕಲ್ಲು ನೆಲವನು ಬಿಡಿಸಿ ಹದ ಮಾಡಿ ಕಾದಿರಲು ಮಳೆಯ ಹೆಸರಿಲ್ಲದೆಯೆ ಹೋಗಬಹುದು||ನೀ ನುಡಿಯದಿರಬಹುದು|| ಆಸೆಗಳಿಗಾಸರೆಯ ನೀಡದೆಯೇ ನಿನ್ನೊಲವು ಬಹುಕಾಲ ಮೊಗದಿರುಗಿ ಸಾಗಬಹುದು| ಕಡೆಗೊಂದು ದಿನ ನಿನಗೆ ತಪ್ಪು ಕಣ್ಣಿಗೆ ಬಂದು ತಾನಾಗಿ ಮನವರಿಕೆ ಆಗಬಹುದು||ನೀ ನುಡಿಯದಿರಬಹುದು|| ಹತ್ತು ವರುಷದ ಹಿಂದೆ ನಾವಿದ್ದ ಮನೆಯಂತೆ ನಾನಿನಗೆ ನೀನೆನಗೆ ಕಾಣಬಹುದು | ಜೀವನದ ತೋಟದಲಿ ಒಂದು ಗಿಳಿ ನಗದಂತೆ ವಿಧಿಯ ಕಟ್ಟಪ್ಪಣೆಯ ಸಾರಬಹುದು||ನೀ ನುಡಿಯದಿರಬಹುದು||