ದಿಕ್ಕೆಡೆಸಿ, ಕಂಗೆಡಿಸಿ, ಮನ ನೋಯಿಸುವೆ ನೀ
ನಾ ಬೀದಿಪಾಲಾಗಬೇಕೆಂಬ ಆಸೆ ಏಕೆ?
ಒಡಹುಟ್ಟಿದವರಲ್ಲವೆ ನಾನು ನೀನು?
ಕೂಡಿ, ಬದುಕಿ, ಬಾಳಿ ಎಂದವರ ಮನೆಯಲ್ಲಿ ಹುಟ್ಟಿ ಹೀಗೇಕೆನುವೆ ನೀ?
ದೇವರ ನಾಮ ನುಡಿಯುತ್ತಾ, ಹಿರಿಯರು ತೋರಿದ ಹಾದಿಯಲ್ಲಿ ನಡೆಯುವುದನ್ನು ಬಿಟ್ಟು ಬಾರದು ನನಗೆ ಬೇರೇನು.
ಬದುಕಲು ಬಿಡು ನನ್ನನ್ನು ಓ ಸುಖಜೀವಿ
ಎಂದಿಗೂ ಮರೆಯೆನು ನಾ ನಿನ್ನ ಋಣವನು
ಬದುಕಲು ಬಿಡು ನನ್ನನ್ನು ಓ ಸುಖಜೀವಿ
ಜಾಹ್ನವಿ. ಕೆ. ಜೆ
Comments
Post a Comment