ಕಾಣದದು ಏನನ್ನು.
ಗೆರೆಯನೆಳೆದೆ ಸೀತೆಯಂತೆ ಮೋಸ ಹೋಗದಿರಲೆಂದು, ಮರೆತೆ,
ದಿಕ್ಕುಗೆಟ್ಟಿತ್ತದು ಬೆಳಕು ಕಣ್ ಕೋರೈಸಿರಲು.
ತುತ್ತನಿತ್ತೆನರಿಯದೆ ತಾಯಂತೆ ಮಮತೆದೋರಿ, ಮರೆತೆ,
ಬೆಳೆವುದಲ್ತೆ ಜೀವನದ ಪರಿ.
ಮುಂದೇನು, ಭವಿಷ್ಯವೇನು ನುಡಿದೆ ಬಟ್ಟೆ ದೋರಿ,
ಮರೆತೆನಲ್ತೆ ಕಾಪಿಡಲಾನು ಪ್ರೀತಿಯ ನವಿರು ಝರಿ.
ಆರಾರು ಹಿತವರೋ ನೀನು ನಾನರಿಯದೆ
ಝರಿ ಬತ್ತಿ ದಡ ಹೊರಳಿ ಮುಂದೆಲ್ಲ ಮರಳುಗಾಡು
ಮರೆತೆ, ನಾನಿಲ್ಲೆ ತಂಗಾಳಿಯೂ ಆಗಬಹುದು ಕುಳಿರ್ಗಾಳಿ.
ಓ ನನ್ನೊಲವೆ ಮುಷ್ಟಿ ಬಿಚ್ಚಿ, ಗೆರೆಯನಳಿಸಿ,
ಮೌನವಾಂತು ಕುಳಿತೆ ನಿಂತಲ್ಲೇ. ಬೀಸಬಹುದೆ ತಂಗಾಳಿ.
ಮಾತನಳಿಸಿ, ಕ್ರಿಯೆಯನಳಿಸಿ, ತಂಪೆರೆಯಬಹುದೇ ಪ್ರೀತಿಯ ಝರಿ, ಮರೆತೆ,
ಕೇಳಿಲ್ಲ ನಾನೆಲ್ಲೂ ಮರಳುಗಾಡಿನಲ್ಲರಳಿದ ಮಲ್ಲಿಗೆಯ ಕಂಪಿನ ಕಥೆ,ಮರೆತೆ,
ನಿರೀಕ್ಷೆಯ ತುದಿಯ ಸುಟ್ಟ ಮೊಗ್ಗಿನ ಮಸಿ ಗಾಢವಿಲ್ಲಂತೆ, ಹಾರಿ, ತೂರಿ ಮಸುಕಾಗುವುದಂತೆ.
ಹಾಂ ಕೊನೆಯಲ್ಲಿ ಮರೆತೆ,
ಶಕ್ತಿಯಿಹುದೋ ಅರಿಯಲ್ಕೆ, ಮನವಿಹುದೋ ಕ್ಷಮಿಸಲ್ಕೆ
ನಿನಗೆ ನೀನರಿಸಿ, ನನಗೆ ನಾನರಸ,
ನವಿಲ್ಗರಿಯ ಬೀಸಣಿಕೆಯ ತಂಪು ಗಾಳಿ
ಲಾವಂಚದ ಗರಿಯ ತಂಪು ನೀರು
ಮರೆತೇ ಹೋಯಿತಲ್ಲ ತಂಗಾಳಿ, ಝರಿಯ ತಿಳಿನೀರು.
ಆದರೆ ಮರೆತಿಲ್ಲ ನವಿರು ಭಾವದ ತಂಬೆಲರು
ಬಣ್ಣ ಬಣ್ಣದ ಒಲವಿನ ಹೂಗುಚ್ಛದ ಹಸಿ ಹಸಿ ಹನಿಗಳು.
ಮರೆತಿಲ್ಲ ಸ್ವಚ್ಛಂದ ಆಕಾಶದಲ್ಲಿ ರೆಕ್ಕೆ ಬಿಚ್ಚಿ ಹಾರುವ ನಿನ್ನ
ಬಣ್ಣ ಬಣ್ಣದ ಒಲವಿನ ಹೂಗುಚ್ಛದ ಹಸಿ ಹಸಿ ಹನಿಗಳು.
ಮರೆತಿಲ್ಲ ಸ್ವಚ್ಛಂದ ಆಕಾಶದಲ್ಲಿ ರೆಕ್ಕೆ ಬಿಚ್ಚಿ ಹಾರುವ ನಿನ್ನ
ಪುನರಾಗಮನದ ಘಳಿಗೆಯ ಮಹತ್ತಿನ ನಿರೀಕ್ಷೆ.
ಹಾಂ! ಕೇಳಲು ಮರೆತೆ ಬರುವೆಯಲ್ಲ ಮತ್ತೆ ನೀನೆನ್ನ ಬಳಿಗೆ?
-ಜಾಹ್ನವಿ
Hi, just followed your blog , have a great weekend :)
ReplyDeleteThank you :) I had a good weekend, have a nice day
Delete