picture source: Google images ಮುಷ್ಟಿ ಮುಚ್ಚಿ ಕೂತೆ ಹಕ್ಕಿ ಹಾರಿ ಹೋಗದಿರಲೆಂದು, ಮರೆತೆ, ಕಾಣದದು ಏನನ್ನು. ಗೆರೆಯನೆಳೆದೆ ಸೀತೆಯಂತೆ ಮೋಸ ಹೋಗದಿರಲೆಂದು, ಮರೆತೆ, ದಿಕ್ಕುಗೆಟ್ಟಿತ್ತದು ಬೆಳಕು ಕಣ್ ಕೋರೈಸಿರಲು. ತುತ್ತನಿತ್ತೆನರಿಯದೆ ತಾಯಂತೆ ಮಮತೆ ದೋ ರಿ, ಮರೆತೆ, ಬೆಳೆವುದಲ್ತೆ ಜೀವನದ ಪರಿ. ಮುಂದೇನು, ಭವಿಷ್ಯವೇನು ನುಡಿದೆ ಬಟ್ಟೆ ದೋರಿ, ಮರೆತೆನಲ್ತೆ ಕಾಪಿಡಲಾನು ಪ್ರೀತಿಯ ನವಿರು ಝರಿ. ಆರಾರು ಹಿತವರೋ ನೀನು ನಾನರಿಯದೆ ಝರಿ ಬತ್ತಿ ದಡ ಹೊರಳಿ ಮುಂದೆಲ್ಲ ಮರಳುಗಾಡು ಮರೆತೆ, ನಾನಿಲ್ಲೆ ತಂಗಾಳಿಯೂ ಆಗಬಹುದು ಕುಳಿರ್ಗಾಳಿ. ಓ ನನ್ನೊಲವೆ ಮುಷ್ಟಿ ಬಿಚ್ಚಿ, ಗೆರೆಯನಳಿಸಿ, ಮೌನವಾಂತು ಕುಳಿತೆ ನಿಂತಲ್ಲೇ. ಬೀಸಬಹುದೆ ತಂಗಾಳಿ. ಮಾತನಳಿಸಿ, ಕ್ರಿಯೆಯನಳಿಸಿ, ತಂಪೆರೆಯಬಹುದೇ ಪ್ರೀತಿಯ ಝರಿ, ಮರೆತೆ, ಕೇಳಿಲ್ಲ ನಾನೆಲ್ಲೂ ಮರಳುಗಾಡಿನಲ್ಲರಳಿದ ಮಲ್ಲಿಗೆಯ ಕಂಪಿನ ಕಥೆ,ಮರೆತೆ, ನಿರೀಕ್ಷೆಯ ತುದಿಯ ಸುಟ್ಟ ಮೊಗ್ಗಿನ ಮಸಿ ಗಾಢವಿಲ್ಲಂತೆ, ಹಾರಿ, ತೂರಿ ಮಸುಕಾಗುವುದಂತೆ. ಹಾಂ ಕೊನೆಯಲ್ಲಿ ಮರೆತೆ, ಶಕ್ತಿಯಿ ಹು ದೋ ಅರಿಯಲ್ಕೆ, ಮನವಿಹುದೋ ಕ್ಷಮಿಸ ಲ್ಕೆ ನಿನಗೆ ನೀನರಿಸಿ, ನನಗೆ ನಾನರಸ, ನವಿಲ್ಗರಿಯ ಬೀಸಣಿಕೆಯ ತಂಪು ಗಾಳಿ ಲಾವಂಚದ ಗರಿಯ ತಂಪು ನೀರು ಮರೆತೇ ಹೋಯಿತಲ್ಲ ತಂಗಾಳಿ, ಝರಿಯ ತಿಳಿನೀರು. ...
A magazine of my everyday thoughts.