Image source |
ಹಿಂದೆ ಕ್ರಮಿಸಿದ ಹಾದಿಯನ್ನುಳಿದು ಇನ್ನೂ ಎನಿತು ದೂರ?
ಬಿಸಿಲ ಬೇಗೆ, ಬಳಲಿಕೆ, ಕಾಲ ಸುಡುವ ಉಸುಕು, ಬೆಯ್ವ ನೆತ್ತಿಯ ಮುಸುಕು.
ಒಂಟಿತನದ ಬಿಸಿಯುಸಿರಿಗೆ ಬೀಸಿ ಬರುವ ಬಿಸಿ ಗಾಳಿಗಿಂತ ತೀವ್ರ ಝಳ.
ಮುಂದೆಲ್ಲೋ ಇದೆಯಂತೆ ತಣ್ಣನೆಯ ಕೊಳ, ತಂಪು ನೆಳಲ ಖರ್ಜೂರದ ಮರ,
ಹತ್ತೆಂಟು ಒಂಟೆಗಳ, ಅವುಗಳೊಡೆಯನ ಬಿಡಾರ,
ಇನ್ನೂ ಎಷ್ಟು ದೂರ?
ಹೋಗದಿಲ್ಲೆ ಉಳಿದರೆ ಬರುವನೇ ನನ್ನ ರಾಜಕುಮಾರ?
ಒಂಟೆಗಳ ಸಾಲ ಮಧ್ಯೆ ತರುವನೇ ಮೇನೆ
ಬಿಸಿಲ ಝಳ ತಾಗದಂತೆ, ಕಾದ ಮರಳು ಸುಡದಂತೆ ಕಾಪಿಟ್ಟು ಕರೆದೊಯ್ವನೆ?
ನಿಂತರೆ ಜಡವಾಗುತ್ತಾ ಇಲ್ಲವಾಗುವ ಭಯ
ನಡೆದರೆ ಎಲ್ಲವೂ ಮರೀಚಿಕೆಯಾಗುವ ಭಯ
ನಿಲ್ಲಲೇ ಇಲ್ಲೇ ಕಾಯುತ್ತಾ. ಇಲ್ಲಾ, ಹೋಗಲೇಮುಂದೆ ದಾರಿ ತೋಚಿದತ್ತ?
ಜಾಹ್ನವಿ ಕಣಕಟ್ಟೆ
ಚೆನ್ನಾಗಿದೆ ಕವಿತೆ
ReplyDeleteಧನ್ಯವಾದಗಳು
Delete